ಶಿವಮೊಗ್ಗದ ಶಾಲೆ, ಕಾಲೇಜುಗಳಿಗೆ ಡಿ.27ರಂದು ರಜೆ ಘೋಷಣೆ, ಯಾವಾವ ಶಾಲೆಗಳು ಬಂದ್ - Suddikanaja | #1 NO 1 NEWS PORTAL OF MALENADU | The Voice of common people
ಶಿವಮೊಗ್ಗದ ಶಾಲೆ, ಕಾಲೇಜುಗಳಿಗೆ ಡಿ.27ರಂದು ರಜೆ ಘೋಷಣೆ, ಯಾವಾವ ಶಾಲೆಗಳು ಬಂದ್

ಶಿವಮೊಗ್ಗದ ಶಾಲೆ, ಕಾಲೇಜುಗಳಿಗೆ ಡಿ.27ರಂದು ರಜೆ ಘೋಷಣೆ, ಯಾವಾವ ಶಾಲೆಗಳು ಬಂದ್Listen to this article

ಸುದ್ದಿ ಕಣಜ.ಕಾಂ | DISTRICT | ELECTION NEWS
ಶಿವಮೊಗ್ಗ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವಿವಿಧ ಕ್ಷೇತ್ರಗಳಲ್ಲಿ ಅವಧಿ ಮುಕ್ತಾಯಗೊಂಡಿರುವ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯರ ಖಾಲಿ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ಡಿಸೆಂಬರ್ 27ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ಡಿ.27 ರಂದು ಮತದಾನವಿರುವ ಕೇಂದ್ರಗಳು ಬಹುತೇಕ ಶಾಲಾ ಕಾಲೇಜುಗಳಾಗಿದ್ದು, ಈ ಮತದಾನ ಕೇಂದ್ರಗಳಲ್ಲಿ ಮತದಾನ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಜಿಲ್ಲೆಯ ಈ ಕೆಳಕಂಡ ಮತದಾನ ಕೇಂದ್ರವಿರುವ ಶಾಲೆಗಳಿಗೆ ರಜೆಯನ್ನು ಘೋಷಿಸಿರುತ್ತಾರೆ.

READ | ಶಿವಮೊಗ್ಗ- ಯಶವಂತಪುರ ರೈಲಿಗೆ ವಿಸ್ಟಾಡೋಮ್ ಬೋಗಿ, ಪ್ರಯಾಣಿಕರಿಗೆ ಪ್ರಯಾಣದೊಂದಿಗೆ ಪ್ರವಾಸದ ಅನುಭವ

ಯಾವಾವ ಶಾಲೆಗಳಿಗೆ ರಜೆ
ಶಿವಮೊಗ್ಗ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿತ್ರಶೆಟ್ಟಿಹಳ್ಳಿ, ಸ.ಕಿ.ಪ್ರಾ.ಶಾಲೆ- ಕಡಲೆವಡ್ಡು, ಪುರದಾಳು, ಸ.ಕಿ.ಪ್ರಾ.ಶಾಲೆ- ಅನುಪಿನಕಟ್ಟೆ, ಸ.ಕಿ.ಪ್ರಾ.ಶಾ- ತ್ಯಾವರೇಕೊಪ್ಪ, ಸ.ಹಿ.ಪ್ರಾ.ಶಾ /ಸ.ಉರ್ದು ಹಿ.ಪ್ರಾ.ಶಾ./ ಸ.ಹಿ.ಪ್ರಾ.ಶಾ-ಹಳೇನಗರ- ಕುಂಸಿ, ಸ.ಹಿ.ಪ್ರಾ.ಶಾ-ದೊಡ್ಡಮಟ್ಟಿ. ಭದ್ರಾವತಿ ತಾಲೂಕಿನ ಸ.ಹಿ.ಪ್ರಾ.ಶಾ.-ಕಲ್ಲಿಹಾಳ್, ರಾಷ್ಟ್ರೀಯ ಪದವಿಪೂರ್ವ ಕಾಲೇಜು-ಬಿ.ಆರ್.ಪ್ರಾಜೆಕ್ಟ್. ಶಿಕಾರಿಪುರ ತಾಲೂಕಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆ-ಹಾರೋಗೊಪ್ಪ, ಸ.ಹಿ.ಪ್ರಾ.ಶಾ.-ಎಂ.ಸಿ.ಆರ್.ಸಿ. ಕಾಲೋನಿ-ಹಾರೋಗೊಪ್ಪ, ಸ.ಕಿ.ಪ್ರಾ.ಶಾ.-ಯರೆಕಟ್ಟೆ, ಸ.ಹಿ.ಪ್ರಾ.ಶಾ.-ಹಿರೇಕೊರಲಹಳ್ಳಿ, ಸ.ಕಿ.ಪ್ರಾ.ಶಾ.-ಅತ್ತಿಬೈಲು, ಸ.ಹಿ.ಪ್ರಾ.ಶಾ.-ತಟ್ಟೆಹಳ್ಳಿ. ಸಾಗರ ತಾಲೂಕಿನ ಸ.ಹಿ.ಪ್ರಾ.ಶಾ.-ಪಡವಗೋಡು ಈ 17 ಮತದಾನ ಕೇಂದ್ರವಿರುವ ಶಾಲೆಗಳಿಗೆ ಡಿ.27 ರಂದು ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಿಸಿರುತ್ತಾರೆ.

19 ತಿಂಗಳು ಬಳಿಕ ಶಾಲೆಗೆ ಬಂದ ಮಕ್ಕಳಿಗೆ ಆರತಿ ಬೆಳಗಿ, ಚಾಕ್ಲೆಟ್ ವಿತರಿಸಿ ಸ್ವಾಗತ, ಹೇಗಿತ್ತು ಮೊದಲ ದಿನ?Listen to this article

ಸುದ್ದಿ ಕಣಜ ವಾಟ್ಸ್ ಆಪ್ ನಂಬರ್ :+91 94831 30291
ಇಮೇಲ್:  editor@suddikanaja.com
ವೆಬ್ ಸೈಟ್ : https://www.suddikanaja.com/

 

trimitrasup@gmail.com'

This news portal is Wasp for information, knowledge and entertainment. In one touch we will provide the each development of gate of malnad. This site will be the unique news portal. And we stand for the voice of people.

 

Don`t copy