ವಾಣಿಜ್ಯ, ಕೈಗಾರಿಕಾ ಸಂಘದ ಚುನಾವಣೆ ನಾಳೆ, ಎಷ್ಟು ಮತದಾರರು, ಎಷ್ಟು ಮತಗಟ್ಟೆಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ವಾಣಿಜ್ಯ, ಕೈಗಾರಿಕಾ ಸಂಘದ ಚುನಾವಣೆ ನಾಳೆ, ಎಷ್ಟು ಮತದಾರರು, ಎಷ್ಟು ಮತಗಟ್ಟೆಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ವಾಣಿಜ್ಯ, ಕೈಗಾರಿಕಾ ಸಂಘದ ಚುನಾವಣೆ ನಾಳೆ, ಎಷ್ಟು ಮತದಾರರು, ಎಷ್ಟು ಮತಗಟ್ಟೆಗಳಿವೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್Listen to this article

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಡಿಸೆಂಬರ್ 26ರಂದು ಮತದಾನ ನಡೆಯಲಿದ್ದು, ಭಾರಿ ಪೈಪೋಟಿ ಸೃಷ್ಟಿಯಾಗಿದೆ.
9 ವರ್ಷಗಳ ಬಳಿಕ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು, ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಎರಡು ಬಣಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. 26ರ ಮಧ್ಯಾಹ್ನ 2ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 5ರ ನಂತರ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.

750 ಜನರಿಗೆ ಓಟಿಂಗ್ ಪವರ್

ಸಂಘದ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 750 ಮತದಾರರಿದ್ದಾರೆ. 8 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಆಡಳಿತ ಮಂಡಳಿಗೆ ಪರಿವರ್ತನ ತಂಡದಿಂದ 11 ಮಂದಿ ಸ್ಪರ್ಧೆಯಲ್ಲಿದ್ದರೆ, ಮತ್ತೊಂದು ತಂಡದಲ್ಲಿ 15 ಜನ ಕಣದಲ್ಲಿದ್ದಾರೆ.
ಯಾವ ಬಣದಿಂದ ಯಾರ ಸ್ಪರ್ಧೆ
ಪರಿವರ್ತನ ತಂಡದಿಂದ ಎಸ್.ಎಸ್‍ಉದಯ್ ಕುಮಾರ್, ಎಂ.ಜಗನ್ನಾಥ್, ಎ.ಎನ್.ಪ್ರಕಾಶ್, ಜಿ.ಎನ್.ಪ್ರಕಾಶ್, ಗಣೇಶ್ ಅಂಗಡಿ, ಎಂ.ಎಂ.ಗೋಪಿ, ಜಿ.ಮಂಜೇಗೌಡ, ಕೆ.ಜಿ.ವಿನೋದ್, ಡಿ.ಪಿ.ಸಂದೀಪ್, ಸೆಂಥಿಲ್ ವೇಲನ್ ಸ್ಪರ್ಧಿಸಿದ್ದಾರೆ. ಎದುರಾಳಿ ಬಣದಲ್ಲಿ ಎನ್.ಗೋಪಿನಾಥ್, ಎಂ.ರಾಜು ಅವರು ಸ್ಪರ್ಧಿಸಿದ್ದಾರೆ. ಒಟ್ಟಾರೆ ಚುನಾವಣಾ ಕಣ ರಂಗೇರಿದ್ದು, ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂದು ಮತದಾರರು ಭಾನುವಾರ ನಿರ್ಧರಿಸಲಿದ್ದಾರೆ.

ಸಂಘದ ಚುನಾವಣೆಯ ಪಕ್ಷಿನೋಟ

2012ರ ಬಳಿಕ ಸಂಘಕ್ಕೆ ಚುನಾವಣೆಯೇ ನಡೆದಿಲ್ಲ. 2014ರಲ್ಲಿ ಅವಿರೋಧ ಆಯ್ಕೆಯಾಗಿತ್ತು. ಆಗ ಡಿ.ಎಸ್.ಅರುಣ್ ಅಧ್ಯಕ್ಷರಾಗಿದ್ದರು. 2016ರಲ್ಲಿಯೂ ಅವಿರೋಧ ಆಯ್ಕೆ ನಡೆದಿದ್ದು, ಡಿ.ಎಂ.ಶಂಕರಪ್ಪ ಅವರು ಅಧ್ಯಕ್ಷರಾಗಿದ್ದರು. 2018ರಲ್ಲಿ ಸಹ ಅವಿರೋಧ ಆಯ್ಕೆಯೇ ಆಗಿದ್ದು, ಜೆ.ಆರ್.ವಾಸುದೇವ್ ಅವರು ಅಧ್ಯಕ್ಷ ಸ್ಥಾನಕ್ಕೇರಿದ್ದರು. 2020ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆ ಸಾಧ್ಯವಾಗಲಿಲ್ಲ. ಈಗ ಚುನಾವಣೆ ನಡೆಯಲಿದೆ.

ಕಾರ್ಮಿಕರಿಗೆ ಶುಭ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ, ಏನದು? ಇಲ್ಲಿದೆ ಮಾಹಿತಿListen to this article

ಸುದ್ದಿ ಕಣಜ ವಾಟ್ಸ್ ಆಪ್ ನಂಬರ್ :+91 94831 30291
ಇಮೇಲ್:  editor@suddikanaja.com
ವೆಬ್ ಸೈಟ್ : https://www.suddikanaja.com/

 

trimitrasup@gmail.com'

This news portal is Wasp for information, knowledge and entertainment. In one touch we will provide the each development of gate of malnad. This site will be the unique news portal. And we stand for the voice of people.

 

Don`t copy