ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಎಂ.ಆರ್.ಎಸ್ (MRS) ವಿದ್ಯುತ್ ಕೇಂದ್ರದಿಂದ ಸರಬರಾಜಾಗುವ ಎಫ್-2 ಫೀಡರ್ ಗೆ ಸಂಬಂಧಿಸಿದಂತೆ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ ಸ್ಪನ್ ಪೋಲ್ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಳಕಂಡ ಪ್ರದೇಶಗಳಲ್ಲಿ ಜನವರಿ 2 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ಭದ್ರಾವತಿಯಲ್ಲಿ ಪೊಲೀಸರ ಭರ್ಜರಿ ಬೇಟೆ, ಲಕ್ಷಾಂತರ ಮೌಲ್ಯದ ರಾಶಿ ರಾಶಿ ಮೊಬೈಲ್ ವಶ
ಎಲ್ಲೆಲ್ಲಿ ಪವರ್ ಕಟ್?
ನಗರ ವ್ಯಾಪ್ತಿಯ ಸವಳಂಗ ರಸ್ತೆ, ಲೂರ್ದು ನಗರ, ಸಿಟಿ ಕಾರ್ಪೊರೇಷನ್, ಕುವೆಂಪು ರಂಗಮಂದಿರ, ಡಿ.ಸಿ.ಕಚೇರಿ, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಬಾಲರಾಜ್ ಅರಸ್ ರಸ್ತೆ, ಫ್ಲಾವರ್ ಮಾರ್ಕೆಟ್ ರಸ್ತೆ, ಅಂಬೇಡ್ಕರ್ ಭವನ, ಕಸ್ತೂರಬಾ ಕಾಲೇಜು, ಬಿಎಸ್.ಎನ್.ಎಲ್ ಕಚೇರಿ, ನೆಹರೂ ರಸ್ತೆ, ತಿಲಕ್ ನಗರ, ದುರ್ಗಿಗುಡಿ, ಪಾರ್ಕ್ ಬಡಾವಣೆ, ಡಿವಿಎಸ್ ಕಾಲೇಜು, ಗೋಪಿ ಸರ್ಕಲ್, ನೆಹರೂ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.