‘ಎಣ್ಣೆ ಸಾಂಗಿನ’ ಗುಂಗು ಇಳಿಯುವ ಮುನ್ನವೇ ಮಲೆನಾಡಿನಲ್ಲಿ ‘ಏಕ್ ಲವ್ ಯಾ’ ಐದನೇ ಹಾಡು ರಿಲೀಸ್, ಶಿವಮೊಗ್ಗ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | KARNATAKA | ENTERTAINMENT
ಶಿವಮೊಗ್ಗ: `ಜೋಗಿ’ ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣದ `ಏಕ್ ಲವ್ ಯಾ’ ಚಿತ್ರದ ಐದನೇ ಹಾಡು ಭಾನುವಾರ ರಾತ್ರಿ ನಗರದ ಹರ್ಷ ದ ಫರ್ನ್ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಚಿತ್ರದ ಎಣ್ಣೆ ಸಾಂಗಿನ ಗುಂಗೇ ಇಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರಿ ಸದ್ದು ಕೂಡ ಮಾಡುತ್ತಿದೆ. ಅದರ ಮಧ್ಯೆಯೇ ಚಿತ್ರದ ಐದನೇ ಹಾಡು ‘ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ’ ಹಾಡನ್ನು ಚಿತ್ರ ತಂಡದ ಸಮ್ಮುಖದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕೆ.ಇ.ಕಾಂತೇಶ್ ಇತರರು ಬಿಡುಗಡೆಗೊಳಿಸಿದರು.
ನಾಲ್ಕು ಹಾಡುಗಳನ್ನು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲಾಗಿದೆ. ಈಗ ಐದನೇ ಹಾಡು ಶಿವಮೊಗ್ಗದಲ್ಲಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಚಿತ್ರ ತಂಡ ಖುಷಿ ವ್ಯಕ್ತಪಡಿಸಿತು.

ಐಶ್ವರ್ಯ ರಂಗರಾಜನ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ `ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ’ ಹಾಡು ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳು ಎಬ್ಬಿಸಿದ್ದು, 1.9 ಮಿಲಿಯನ್ ಗೂ ಅಧಿಕ ಜನ ವೀಕ್ಷಿಸಿದ್ದಾರೆ.

ಶಿವಮೊಗ್ಗ ಬಗ್ಗೆ ರಚಿತಾ ಹೇಳಿದ್ದೇನು?
‘ಶಿವಮೊಗ್ಗಕ್ಕೆ ಇದೇ ಮೊದಲನೇ ಸಲ ಬಂದಿದ್ದೇನೆ. ಮಲೆನಾಡಿನ ಹೆಬ್ಬಾಗಿಲಿಗೆ ಬಂದಿರುವುದಕ್ಕೆ ಭಾರಿ ಖುಷಿಯಾಗಿದೆ. ಇಲ್ಲಿಯ ಜನ ಚಿತ್ರಕ್ಕೆ ಪೂರ್ಣ ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.
‘ಜೋಗಿ’ ಪ್ರೇಮ್ ಆಕ್ಷನ್ ಕಟ್ ಹೇಳಿರುವ ಚಿತ್ರವೆಂದ ಮೇಲೆ ಸಾಂಗ್ ಗಳ ಬಗ್ಗೆ ಅಂತ ಹೇಳುವುದೇ ಬೇಡ, ಒಂದಕ್ಕಿಂತ ಇನ್ನೊಂದು ಅದ್ಭತವಾಗಿವೆ. ಅದರಲ್ಲೂ `ಎಣ್ಣೆಗೂ ಹೆಣ್ಣಿಗೂ’ ಹಾಡು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ಅದನ್ನು ಕಾನ್ಫಿಡೆನ್ಸ್ ನಿಂದ ಮಾಡಿದ್ದೇನೆ. ಪ್ರೇಕ್ಷಕರಿಗೂ ಇಷ್ಟವಾಗಿದೆ ಎಂದು ರಚ್ಚು ಹೇಳಿದರು.
ಚಿತ್ರನಟ ರಾಣಾ, ನಟಿ ರೀಷ್ಮಾ, ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ ಪ್ರೇಮ್, ಚಿತ್ರದಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿರುವ ನಿಖಿಲ್, ಸೂರಜ್ ಮತ್ತಿತರರು ಉಪಸ್ಥಿತರಿದ್ದರು.

https://www.suddikanaja.com/2021/02/27/cm-bs-yadiyurappa-birthday-special-program-in-old-jail/

error: Content is protected !!