ಭದ್ರಾವತಿಯಲ್ಲಿ 9 ಜನ ಕ್ರೈಸ್ತ ಧರ್ಮದಿಂದ ಘರ್ ವಾಪಸಿ

 

 

ಸುದ್ದಿ ಕಣಜ.ಕಾಂ | TALUK | GHAR WAPSI
ಭದ್ರಾವತಿ: ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ 9 ಜನ ಕ್ರೈಸ್ತ ಧರ್ಮದಿಂದ ಮಾತೃಧರ್ಮಕ್ಕೆ ಭಾನುವಾರ ಮರಳಿದ್ದಾರೆ.
ಜನ್ನಾಪುರದ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶ್ವ ಹಿಂದೂ ಪರಿಷದ್ (vishwa hindu parishad), ಬಜರಂಗ ದಳ (bajrang dal) ದ ಭದ್ರಾವತಿ ಮುಖಂಡರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರನ್ನು ಹಿಂದೂ ಧರ್ಮ (hindu religion) ಕ್ಕೆ ಬರಮಾಡಿಕೊಳ್ಳಲಾಯಿತು.
ಅಂತರಗಂಗೆ ಗ್ರಾಮದ ನಿವಾಸಿ ಜಯಶೀಲನ್, ಜಯಮ್ಮ ಇವರ ಕುಟುಂಬ ಸದಸ್ಯರಾದ ಪ್ರಭಾಕರನ್ ಲಲಿತಾ ಪ್ರಭಾಕರನ್, ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ್, ಶ್ವೇತಾ ಪ್ರಕಾಶ್ ಹಾಗೂ ಪುತ್ರಿ ಪೃಥ್ವಿ ಜೊತೆಗೂಡಿ ಘರ್ ವಾಪಸಿಯಾದರು.

ಜಯಶೀಲನ್ ಅವರ ತಂದೆ ಏಳುಮಲೈ ಎಂಬುವವರು ಕ್ರೈಸ್ತ ಧರ್ಮ (christian religion) ವನ್ನು ಸ್ವೀಕರಿಸಿದ್ದರು. ಆದರೆ, ಇವರ ಕುಟುಂಬದವರು ಹಿಂದೂ ಧರ್ಮದ ಆಚರಣೆಗಳನ್ನೇ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ತಮ್ಮ ಸಂಪೂರ್ಣ ಆತ್ಮಸಾಕ್ಷಿಯಿಂದ ಹಿಂದೂಧರ್ಮ ಸೇರುವ ವಿಜ್ಞಾಪನೆ ಮಾಡಿಕೊಂಡು ಅವರ ಅನುಮತಿ ಆಶೀರ್ವಾದ ಪಡೆದುಕೊಂಡರು. ವಿಶ್ವಹಿಂದೂ ಪರಿಷತ್ತಿನ ಪ್ರಮುಖರಾದ ಹಾ. ರಾಮಪ್ಪ, ಡಿ.ಆರ್.ಶಿವಕುಮಾರ್, ವೈ.ಎಸ್.ರಾಮಮೂರ್ತಿ, ಎಸ್. ನಾರಾಯಣ್, ಪಿ. ಮಂಜುನಾಥ್ ರಾವ್, ಶೈಲೇಶ್ ಕೋಟಿ, ಸಿ. ಮಹೇಶ್ವರಪ್ಪ ಶಿವಮೂರ್ತಿ ಉಪಸ್ಥಿತರಿದ್ದರು.

https://www.suddikanaja.com/2021/12/07/birthday-celebretion-in-nt-road-shimoga-rdpr-minister-ks-eshwarappa-and-swamijis-participated-in-program/

error: Content is protected !!