ಶಿವಮೊಗ್ಗದಲ್ಲಿ ಡಿಜಿಟಲ್ ವಿಲೇಜ್‍, ಮನ್ ಕೀ ಬಾತ್ ಬಿಚ್ಚಿಟ್ಟ ಡಿ.ಎಸ್.ಅರುಣ್
ಶಿವಮೊಗ್ಗದಲ್ಲಿ ಡಿಜಿಟಲ್ ವಿಲೇಜ್‍ಗೆ ಒತ್ತು, ಪಶ್ನಾವಳಿಯೊಂದಿಗೆ ಪ್ರತಿ ಪಂಚಾಯಿತಿಗೂ ಭೇಟಿ, ಮನ್ ಕೀ ಬಾತ್ ಬಿಚ್ಚಿಟ್ಟ ಡಿ.ಎಸ್.ಅರುಣ್

ಶಿವಮೊಗ್ಗದಲ್ಲಿ ಡಿಜಿಟಲ್ ವಿಲೇಜ್‍ಗೆ ಒತ್ತು, ಪಶ್ನಾವಳಿಯೊಂದಿಗೆ ಪ್ರತಿ ಪಂಚಾಯಿತಿಗೂ ಭೇಟಿ, ಮನ್ ಕೀ ಬಾತ್ ಬಿಚ್ಚಿಟ್ಟ ಡಿ.ಎಸ್.ಅರುಣ್Listen to this article

ಸುದ್ದಿ ಕಣಜ.ಕಾಂ | DISTRICT  | POLITICAL NEWS
ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ನೂತನ ಸದಸ್ಯ ಡಿ.ಎಸ್.ಅರುಣ್ ಅವರು ಮನದಾಳದ ಮಾತುಗಳನ್ನು ಸಂವಾದದಲ್ಲಿ ಹಂಚಿಕೊಂಡರು. ಆಗಬೇಕಾದ ಕೆಲಸಗಳ ಕುರಿತು ಮತ್ತು ತಮ್ಮ ಕನಸಿನ ಪಂಚಾಯಿತಿ ಹೇಗಿರಬೇಕು ಎಂಬ ಅಂಶವನ್ನು ಬಿಚ್ಚಿಟ್ಟರು.
ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ 31ರಿಂದ ಫೆಬ್ರವರಿ 15ರ ಬಳಿಕ ಎಲ್ಲ ಪಂಚಾಯಿತಿಗೆ ಭೇಟಿ ನೀಡುವೆ. ಅಲ್ಲಿ ಪ್ರಶ್ನಾವಳಿಯೊಂದಿಗೆ ಹೋಗುವೆ. ಅಲ್ಲಿ ಯಾವ ಸೌಲಭ್ಯಗಳಿವೆ ಹಾಗೂ ಇಲ್ಲ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುವೆ. ಅದಕ್ಕೆ ಅನುಗುಣವಾಗಿ ರಚನಾತ್ಮಕವಾಗಿ ಕೆಲಸ ಮಾಡುವೆ ಎಂದರು.

ಸಂವಾದದಲ್ಲಿ ಅರುಣ್ ಕನಸು ಮತ್ತು ವಾಗ್ಝರಿಯ ಪ್ರಮುಖ ಅಂಶಗಳು
  1. ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ 362 ಗ್ರಾಪಂಗಳಿವೆ. ಪ್ರತಿಯೊಂದಕ್ಕೆ ಒಂದು ಗಂಟೆ ಮೀಸಲು ಇಡುವೆ. ಈ ನಿಟ್ಟಿನಲ್ಲಿಯೂ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಈ ಮುಂಚೆಯೇ ಮಾತು ನೀಡಿರುವಂತೆ ದಿನದ 12 ಗಂಟೆ ಕ್ಷೇತ್ರಕ್ಕಾಗಿ ಮೀಸಲು ಇಡುವೆ.
  2. ಹಳ್ಳಿಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇದೆ. ಪಂಚಾಯಿತಿಗಳ ಡಿಜಿಟಲ್ ಆಗಬೇಕಿದೆ. ಜೊತೆಗೆ, ವೈಫೈ ಸೌಲಭ್ಯವೂ ಸಿಗಬೇಕು. ತಾಂತ್ರಿಕವಾಗಿ ಸದೃಢಗೊಂಡರೆ ತಾನಾಗಿಯೇ ಗ್ರಾಪಂಗಳ ಕಾರ್ಯವೈಖರಿ ಬದಲಾಗುತ್ತದೆ.
  3. ಗ್ರಾಪಂಗಳಲ್ಲಿ ಈಗಾಗಲೇ ಶೇ.50 ಡಿಜಿಟಲೈಸೇಷನ್ ಇದೆ. ಆದದರೆ, ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ಈ ಕಾರಣದಿಂದಾಗಿ ಹಳ್ಳಿ ಜನ ಸರ್ಟಿಫಿಕೇಟ್ ಪಡೆಯಲು ನಗರಕ್ಕೆ ಬರುತ್ತಿದ್ದಾರೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ.
  4. ಪಂಚಾಯಿತಿಗೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಪ್ರತಿ ಗ್ರಾಪಂಗಳಿಗೆ ಮೂಲಸೌಲಭ್ಯ ಕಲ್ಪಿಸುವೆ. ವಿದ್ಯುತ್, ನೀರು, ಕೆರೆ ಒತ್ತುವರಿ, ಅರಣ್ಯ ಮತ್ತು ಕಂದಾಯ ಭೂಮಿ, ಬಗರುಹುಕುಂ ಸಮಸ್ಯೆಗಳ ಕಡೆ ಗಮನ

ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಎಸ್. ಯಡಗೆರೆ, ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

ಡಿ.ಎಸ್.ಅರುಣ್ ಎಂಎಲ್‍ಸಿ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ, ಸಂಸದ ರಾಘವೇಂದ್ರ ಹೇಳಿದ್ದೇನು?Listen to this article

ಸುದ್ದಿ ಕಣಜ ವಾಟ್ಸ್ ಆಪ್ ನಂಬರ್ :+91 94831 30291
ಇಮೇಲ್:  editor@suddikanaja.com
ವೆಬ್ ಸೈಟ್ : https://www.suddikanaja.com/

 

trimitrasup@gmail.com'

This news portal is Wasp for information, knowledge and entertainment. In one touch we will provide the each development of gate of malnad. This site will be the unique news portal. And we stand for the voice of people.

 

Don`t copy