ತಂದ ತಿಂಡಿ ಚೆಲ್ಲಿ, ಹೂವು ಬಿಸಾಡಿ ಹೋದ ಬೀದಿ ವ್ಯಾಪಾರಿಗಳು

 

 

ಸುದ್ದಿ ಕಣಜ.ಕಾಂ | DISTRICT | WEEKEND CURFEW
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ಬೀದಿ ಬದಿ ವ್ಯಾಪಾರಿಗಳ ಬದುಕಿನ ಮೇಲೆ ತನ್ನೀರು ಎರಚಿದೆ. ಶನಿವಾರ ಬೆಳಗ್ಗೆಯಿಂದಲೇ ಹೂವು, ಹಣ್ಣು, ತಿನಿಸು ಮಾರಾಟಗಾರರು ಹೀಗೆ ವಿವಿಧ ವ್ಯಾಪಾರಿಗಳು ವ್ಯಾಪಾರವಿಲ್ಲದೇ ನಲುಗಿದರು.
ನಗರದ ಬಿ.ಎಚ್.ರಸ್ತೆ, ಖಾಸಗಿ ಬಸ್ ನಿಲ್ದಾಣ, ಲಕ್ಷ್ಮೀ ಟಾಕೀಸ್, ಮೆಗ್ಗಾನ್ ಆಸ್ಪತ್ರೆ ಮುಂಭಾಗ ಹೀಗೆ ವಿವಿಧೆಡೆ ನಿತ್ಯ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳು ನಡು ಬಿಸಿಲಿನಲ್ಲಿಯೇ ಕುಳಿತುಕೊಂಡಿದ್ದರು.

ಬೀದಿ ವ್ಯಾಪಾರಿಗಳ ಕಣ್ಣೀರ ಕಥೆ ವಿಡಿಯೋ ವೀಕ್ಷಿಸಿ (VIDEO REPORT)

 ವೀಕೆಂಡ್ ಕರ್ಫ್ಯೂದಿಂದಾಗಿ ಬೀದಿ ಬದಿ ವ್ಯಾಪಾರಿ(street vendors)ಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಶನಿವಾರ ಹೂವು, ತಿಂಡಿ ತಂದ ವ್ಯಾಪಾರಿಗಳು ಹಾಗೆಯೇ ವಾಪಸ್ ತೆರಳಿದ್ದಾರೆ. ಇವರ ನಷ್ಟ ಯಾರು ಭರಿಸುತ್ತಾರೆ. ಸರ್ಕಾರ ಇವರಿಗಾದ ನಷ್ಟವನ್ನು ಕೂಡಲೇ ಭರಿಸಬೇಕು.

– ಚನ್ನವೀರಪ್ಪ ಗಾಮನಗಟ್ಟಿ, ಜಿಲ್ಲಾಧ್ಯಕ್ಷ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ

ಈ ವೇಳೆ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಅವರು, ವ್ಯಾಪಾರಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದರು.

ಬೆಳಗ್ಗೆ ತಿಂಡಿ ಗಾಡಿಯ ವ್ಯಾಪಾರಿ ಪಾರ್ಸಲ್ ನೀಡಲು ಅವಕಾಶವಿದೆ ಎಂದು ವಿಧ ವಿಧವಾದ ತಿಂಡಿಗಳ ಮಾಡಿ ಪಾರ್ಸಲ್ ನೀಡಲು ಅಂಗಡಿ ತೆರೆದಿದ್ದಾರೆ. ಆದರೆ, ಗ್ರಾಹಕರು ಇಲ್ಲದೆ ತಿಂಡಿಗಳನ್ನು ಚೆಲ್ಲಿದ ದೃಶ್ಯ ಕೆಲವು ಕಡೆಗಳಲ್ಲಿ ಕಂಡುಬಂದಿದೆ. ಹಣ್ಣು ಹಂಪಲು, ತರಕಾರಿ, ಸೊಪ್ಪು, ಮಾರುವ ವ್ಯಾಪಾರಿಗಳು ನಮ್ಮ ಹಣ್ಣುಗಳು ಹಾಳಾಗುತ್ತಿವೆ.

https://www.suddikanaja.com/2021/08/29/neelakurinji-grow-in-western-ghat/

error: Content is protected !!