ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಪ್ರಕರಣದಲ್ಲಿ ಮತ್ತೆ ಏರಿಕೆಯಾಗಿದ್ದು, ಮಂಗಳವಾರ ಹೊಸದಾಗಿ 133 ಮಂದಿಗೆ ಸೋಂಕು ತಗುಲಿದೆ.
ಶಿವಮೊಗ್ಗ ತಾಲೂಕಿನಲ್ಲಿ 84 ಪ್ರಕರಣಗಳು ಪತ್ತೆಯಾದರೆ, ಭದ್ರಾವತಿಯಲ್ಲಿ 20, ತೀರ್ಥಹಳ್ಳಿ 6, ಶಿಕಾರಿಪುರ 5, ಸಾಗರ 11, ಹೊಸನಗರ 3, ಸೊರಬದಲ್ಲಿ 4 ಪ್ರಕರಣಗಳು ದೃಢಪಟ್ಟಿವೆ.
ಸಕ್ರಿಯ ಪ್ರಕರಣ 548
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ 548 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 78, ಡಿಸಿಎಚ್.ಸಿಯಲ್ಲಿ 32, ಖಾಸಗಿ ಆಸ್ಪತ್ರೆಯಲ್ಲಿ 42, ಮನೆ ಆರೈಕೆಯಲ್ಲಿ 384 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಟ್ರಿಯೇಜ್ ನಲ್ಲಿದ್ದಾರೆ.