JOBS ON PUC ಗ್ರಾಮ ಲೆಕ್ಕಿಗರ ನೇಮಕಾತಿ, ಆಕಾಂಕ್ಷಿಗಳಿಗೆ ಶುಭ ಸುದ್ದಿ
JOBS ON PUC  | ಗ್ರಾಮ ಲೆಕ್ಕಿಗರ ನೇಮಕಾತಿ, ಆಕಾಂಕ್ಷಿಗಳಿಗೆ ಶುಭ ಸುದ್ದಿ

JOBS ON PUC | ಗ್ರಾಮ ಲೆಕ್ಕಿಗರ ನೇಮಕಾತಿ, ಆಕಾಂಕ್ಷಿಗಳಿಗೆ ಶುಭ ಸುದ್ದಿListen to this article

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಬೆಂಗಳೂರು: ರಾಜ್ಯ ಸರ್ಕಾರ (state government) ಪಿಯುಸಿ ಪಾಸ್ (puc pass)ಆದವರಿಗೆ ಶುಭ ಸುದ್ದಿ  ((good news) ನೀಡಿದೆ. ರಾಜ್ಯದಲ್ಲಿ ಕಂದಾಯ ಇಲಾಖೆ (revenue department) ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ (recruitment) ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಶಿವಕುಮಾರ್ ಅವರು ಎಲ್ಲ ಜಿಲ್ಲಾಧಿಕಾರಿ(DC) ಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

READ | ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿಗಾಗಿ ಅರ್ಜಿ, ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ, ಎಷ್ಟು ಹುದ್ದೆ ಖಾಲಿ?

ಕರ್ನಾಟಕದಲ್ಲಿ ಒಟ್ಟು 9,839 ಗ್ರಾಮ ಲೆಕ್ಕಿಗರ (village accountant) ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 1,789 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ನೇಮಕಾತಿ ಮಾಡಲಿದೆ.
ಡಿಸಿಗಳಿಗೆ ಬರೆದಿರುವ ಪತ್ರದಲ್ಲಿ ಏನಿದೆ?
ಆಯಾ ಜಿಲ್ಲೆಗಳಲ್ಲಿ ಮಂಜೂರಾದ ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ ಶೇ.30ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇದ್ದಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ನೇಮಕಾತಿ ಹೇಗೆ ನಡೆಯಲಿದೆ?
ಗ್ರಾಮ ಲೆಕ್ಕಿಗರ ಹುದ್ದೆಗೆ ಅರ್ಜಿ ಸಲ್ಲಿರುವ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು. ಇದಕ್ಕೆ ಯಾವುದೇ ಬಗೆಯ ಸ್ಪರ್ಧಾತ್ಮಕ ಪರೀಕ್ಷೆ (competitive exams) ಇರುವುದಿಲ್ಲ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಅಧಿಸೂಚನೆ(notification)ಯ ಮೂಲಕ ನೇಮಕಾತಿ ನಡೆಸಲಿದ್ದಾರೆ.

VA RECRUITMENT LETTER

ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ‌ ನೀಡಿದ ಸರ್ಕಾರ, ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಭರ್ಜರಿ ಖಾಲಿ,‌ ನಡೆಯಲಿದೆ ನೇಮಕಾತಿListen to this article

ಸುದ್ದಿ ಕಣಜ ವಾಟ್ಸ್ ಆಪ್ ನಂಬರ್ :+91 94831 30291
ಇಮೇಲ್:  editor@suddikanaja.com
ವೆಬ್ ಸೈಟ್ : https://www.suddikanaja.com/

 

trimitrasup@gmail.com'

This news portal is Wasp for information, knowledge and entertainment. In one touch we will provide the each development of gate of malnad. This site will be the unique news portal. And we stand for the voice of people.

 

Don`t copy