ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣ ಅತ್ಯಧಿಕವಿದ್ದು, ಶುಕ್ರವಾರ ಶಿವಮೊಗ್ಗದಲ್ಲಿ 121 ಮತ್ತು ಭದ್ರಾವತಿಯಲ್ಲಿ 65 ಜನರಲ್ಲಿ ಸೋಂಕು ಪತ್ತೆಯಾಗಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ 10, ಶಿಕಾರಿಪುರದಲ್ಲಿ 3, ಸಾಗರದಲ್ಲಿ 39, ಹೊಸನಗರದಲ್ಲಿ 37, ಸೊರಬದಲ್ಲಿ 2, ಬಾಹ್ಯ ಜಿಲ್ಲೆಯ 11 ಪ್ರಕರಣಗಳು ಪಾಸಿಟಿವ್ ಬಂದಿವೆ.
ಸಕ್ರಿಯ ಪ್ರಕರಣದಲ್ಲಿ ಏರಿಕೆ
ಕೋವಿಡ್ ಆಸ್ಪತ್ರೆಯಲ್ಲಿ 38, ಡಿಸಿಎಚ್.ಸಿಯಲ್ಲಿ 35, ಖಾಸಗಿ ಆಸ್ಪತ್ರೆಯಲ್ಲಿ 8, ಮನೆ ಆರೈಕೆಯಲ್ಲಿ 1058, ಟ್ರಿಯೇಜ್ ನಲ್ಲಿ 29 ಸೇರಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,168ಕ್ಕೆ ಹೆಚ್ಚಿದೆ. ಇಂದು 288 ಜನರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, 99 ಜನ ಚಿಕಿತ್ಸೆ ಪಡೆದು ಕಾಯಿಲೆಯಿಂದ ವಾಸಿಯಾಗಿದ್ದಾರೆ.