ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಗಾಂಜಾ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರಿಂದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿಪ್ಪುನಗರದ ಪವನ್ (22) ಬಂಧಿತ. ನಗರದ ವಿನಾಯಕ ಸರ್ಕಲ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಕಂಡ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ವಿಚಾರಿಸಿದ್ದಾರೆ. ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈತನ ವಿರುದ್ಧ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. (NARCOTIC DRUGS AND PSYCHOTROPIC SUBSTANCES) ಕಾಯ್ದೆ (ACT) ಅಡಿ ಪ್ರಕರಣ ದಾಖಲಾಗಿದೆ.