ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಚಲಿಸುತ್ತಿದ್ದ ಬಸ್ ಹತ್ತಲು ಹೋದ ವಿದ್ಯಾರ್ಥಿ ರಸ್ತೆಯ ಮೇಲೆ ಬಿದ್ದ ಘಟನೆ ಸೋಮವಾರ ಸಂಜೆ ನಡೆದಿದೆ.
ಚಲಿಸುತ್ತಿದ್ದ ಬಸ್ ಹತ್ತಲು ಹೋದ ವಿದ್ಯಾರ್ಥಿ ಕೆಳಗೆ ಬಿದ್ದ ವಿಡಿಯೋ ವೀಕ್ಷಿಸಿ
ಇಡುವಾಣಿಯ ಚಿಪ್ಪಲಮಕ್ಕಿಯ ಓಂಭತ್ತನೇ ತರಗತಿಯ ವಿದ್ಯಾರ್ಥಿ ವೈಭವ್ ಎಂಬುವ ವಿದ್ಯಾರ್ಥಿಯು ಬಸ್ ಚಲಿಸುತ್ತಿರುವಾಗಲೇ ಅದನ್ನು ಹತ್ತಲು ಯತ್ನಿಸಿದ್ದಾನೆ. ಆದರೆ, ಸುದೈವ ಅಪಾಯದಿಂದ ಪಾರಾಗಿದ್ದಾನೆ.
ವೈಭವ್ ಬಸ್ ನಿಲ್ದಾಣದಿಂದ ಹೊರಟ ಬಸ್ ಅನ್ನು ಓಡಿ ಹೋಗಿ ಹತ್ತಲು ಯತ್ನಿಸಿದ್ದಾನೆ. ಆದರೆ ಬಸ್ ಚಾಲಕ ವೇಗವಾಗಿ ಹೋದ ಕಾರಣ ವಿದ್ಯಾರ್ಥಿ ಬಸ್ ಪಕ್ಕದಲ್ಲೇ ಬಿದ್ದಿದ್ದಾನೆ. ರಸ್ತೆಯ ಮೇಲೆ ಯಾವುದೇ ವಾಹನಗಳು ಬಂದಿಲ್ಲವಾದ್ದರಿಂದ ಅಪಾಯ ಸಂಭವಿಸಿಲ್ಲ.
ವಿದ್ಯಾರ್ಥಿ ಬಸ್ ನಿಂದ ಕೆಳಗೆ ಬೀಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಭಾರಿ ವೈರಲ್ ಕೂಡ ಆಗಿದೆ. ನೋಡಿದವರ ಹೃದಯ ಝಲ್ ಎನಿಸುವಂತಿದೆ.