ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಬಗ್ಗೆ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಗಲಾಟೆಯಲ್ಲಿ ಸಾಕಷ್ಟು ಅಹಿತಕರ ಘಟನೆಗಳಿಗೆ ಶಿವಮೊಗ್ಗ ಸಾಕ್ಷಿಯಾಗಿದೆ.
VIDEO REPORT
READ | ಹಿಜಾಬ್-ಕೇಸರಿ ಶಾಲು ವಿವಾದ, ಶಿವಮೊಗ್ಗದಲ್ಲಿ ಇಂದು ದಾಖಲಾದ ಎಫ್.ಐ.ಆರ್ ಎಷ್ಟು?
ಮಂಗಳವಾರ ಬೆಳಗ್ಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಕೆಳಕಂಡಂತೆ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಘಟನೆ 1 | ಶಿವಮೊಗ್ಗ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್.ಸಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಬೆಳಗ್ಗೆ 10:30 ಗಂಟೆಗೆ ಕಾಲೇಜಿನ ಕಾರಿಡಾರ್ ನಲ್ಲಿ ನಿಂತುಕೊಂಡಿದ್ದಾಗ ಗುಂಪಿನಲ್ಲಿದ್ದವರು ಯಾರೋ ಕಲ್ಲುಗಳನ್ನು ಎಸೆದಿದ್ದು ಕಲ್ಲು ಇವರ ಹಣೆಗೆ ಮತ್ತು ತಲೆಯ ಹಿಂಭಾಗಕ್ಕೆ ಬಿದ್ದು ಇಬ್ಬರಿಗೂ ರಕ್ತ ಗಾಯವಾಗಿದೆ. ಈ ಬಗ್ಗೆ ಐಪಿಸಿ ಕಲಂ 143, 144, 147, 148, 324, 149 ರೀತ್ಯಾ ಪ್ರಕರಣ ದಾಖಲಾಗಿದೆ.
ಘಟನೆ 2 | ನಗರದ ಬಸವನಗುಡಿ ವಾಸಿಯೊಬ್ಬರು ಗಾರೆ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಮನೆಗೆ ಹೋಗಲು ಬಾಪೂಜಿ ನಗರದ ಪ್ರಥಮ ದರ್ಜೆ ಕಾಲೇಜ್ ಕ್ರಾಸ್ ಹತ್ತಿರ ಫರ್ನಿಚರ್ ಶಾಪ್ ಎದುರು ರಸ್ತೆಯಲ್ಲಿ ಹೋಗುತ್ತಿರುವಾಗ ಸುಮಾರು 30-40 ಜನರು ಗುಂಪು ಕಟ್ಟಿಕೊಂಡು ಬಂದು ಅಡ್ಡಗಟ್ಟಿ ಗಲಾಟೆ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ಮಾಡಿದ್ದಾರೆ. ಠಾಣೆಯಲ್ಲಿ ಐಪಿಸಿ ಕಲಂ 143, 341, 504, 323, 506, 149 ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಘಟನೆ 3 | ಹಿಜಾಬ್ ಬಂದೋಬಸ್ತ್ ಕರ್ತವ್ಯ ನಿಮಿತ್ತ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಮೊಗ್ಗ ಬಾಪೂಜಿನಗರ ಡಿಗ್ರಿ ಕಾಲೇಜು ಸಮೀಪ ವಿನೋಬನಗರ ಠಾಣೆ ಇಲಾಖಾ ವಾಹನ ಸಂಖ್ಯೆ ಕೆ.ಎ. 14-ಜಿ-951 ರ ಬೊಲೆರೋ ವಾಹನವನ್ನು ನಿಲ್ಲಿಸಿಕೊಂಡಿದ್ದಾಗ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಜೀಪ್ ನ ಮುಂದಿನ ಗ್ಲಾಸ್ ಒಡೆದು ಹೋಗಿ ಸರ್ಕಾರಿ ಆಸ್ತಿಗೆ ಹಾನಿಯನ್ನುಂಟು ಮಾಡಿದ್ದು ಈ ಬಗ್ಗೆ ಠಾಣೆಯಲ್ಲಿ ಐಪಿಸಿ ಕಲಂ 427, 143, 144, 147, 148, 149 ಐಪಿಸಿ ಮತ್ತು ಕಲಂ 3 PREV. OF DAMAGE TO PUBLIC PROPERTY ACT 1984 ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಘಟನೆ 4 | ಟಿಪ್ಪುನಗರದ ವಾಸಿಯೊಬ್ಬರು ಬೈಕ್ ನಲ್ಲಿ ತನ್ನ ಸ್ನೇಹಿತರನ್ನು ಕೂರಿಸಿಕೊಂಡು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಹೋಗುತ್ತಿದ್ದಾಗ 8-10 ಜನ ಯುವಕರು ಇವರನ್ನು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಆಯುಧಗಳಿಂದ ಹಲ್ಲೆ ನಡೆಸಿ ರಕ್ತಗಾಯ ಪಡಿಸಿದ್ದಾರೆ. ಠಾಣೆಯಲ್ಲಿ ಐಪಿಸಿ ಕಲಂ 143,144, 147,148, 341,504, 323, 324, 149 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
https://www.suddikanaja.com/2022/02/08/hijab-saffron-controversy-lathi-charge-in-shivamogga/