ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ನೇರವಾಗಿ ಚಿನ್ನದ ಬೆಲೆಯ ಮೇಲೆ ಬೀರಿತ್ತು. ಇದರಿಂದಾಗಿ, ಬೆಂಗಳೂರು ಮಾರುಕಟ್ಟೆಯಲ್ಲಿ ಬುಧವಾರದಂದು 24 ಕ್ಯಾರೆಟ್ ಚಿನ್ನದ ದರ 54,330 ರೂಪಾಯಿ ಏರಿಕೆಯಾಗಿತ್ತು. ಆದರೆ, ಗುರುವಾರದಂದು 10 ಗ್ರಾಂ ಮೇಲೆ 1,750 ರೂಪಾಯಿ ಇಳಿಕೆಯಾಗಿದೆ.
READ | ಚಿನ್ನದ ಬೆಲೆ ದಿಢೀರ್ ಏರಿಕೆಗೆ ಟಾಪ್ 4 ಕಾರಣ
ಮಾರ್ಚ್ 10ರಂದು 22 ಕ್ಯಾರೆಟ್ ಚಿನ್ನದ ಬೆಲೆಯು 48,200 ರೂಪಾಯಿ ಹಾಗೂ 24 ಕ್ಯಾರೆಟ್ ಗೆ 52,580 ರೂಪಾಯಿ ಇದ್ದು, ಒಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿದ್ದ ಬೆಲೆಗೆ ಬ್ರೇಕ್ ಬಿದ್ದಂತಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಅಪರಂಜಿಯ ಬೆಲೆಯು 55,200 ರೂಪಾಯಿ ನಿಗದಿಯಾಗಿತ್ತು. ಮಾರನೇ ದಿನವೇ ಬೆಲೆಯಲ್ಲಿ ಇಳಿಕೆಯಾಗಿದೆ.
ಬೆಳ್ಳಿಯೂ ಬೆಲೆಯಲ್ಲೂ ಇಳಿಕೆ
ಬೆಳ್ಳಿಯ ಬೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕರಡಿ ಕುಣಿತ ಕಂಡುಬರುತ್ತಿದೆ. ಮಾರ್ಚ್ 5ರಿಂದ ಈಚೆಗೆ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತಿದೆ. ಮಾರ್ಚ್ 9ರಂದು ಪ್ರತಿ ಕೆಜಿ ಬೆಳ್ಳಿಯ ಬೆಲೆಯು 75,700 ರೂಪಾಯಿ ಆಗಿತ್ತು. ಆದರೆ, ಮಾ.10ರಂದು ಪ್ರತಿ ಕೆಜಿಯ ಮೇಲೆ 2,600 ರೂ. ಇಳಿಕೆಯಾಗುವ ಮೂಲಕ 74,100 ರೂ. ಬೆಲೆ ನಿಗದಿಯಾಗಿದೆ.
READ | Today Gold Rate ಬಂಗಾರದ ಬೆಲೆಯಲ್ಲಿ ದಾಖಲೆಯ ಏರಿಕೆ, 9 ದಿನಗಳ ರೇಟ್ ಇಲ್ಲಿದೆ
ಬೆಂಗಳೂರಲ್ಲಿ ಚಿನ್ನ, ಬೆಳ್ಳಿಯ ಬೆಲೆ | |||
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ(ಕೆಜಿ) |
ಮಾರ್ಚ್ 4 | 47,700 | 52,040 | 72,500 |
ಮಾರ್ಚ್ 5 | 48,400 | 52,800 | 73,400 |
ಮಾರ್ಚ್ 6 | 48,400 | 52,800 | 73,400 |
ಮಾರ್ಚ್ 7 | 49,400 | 53,890 | 75,700 |
ಮಾರ್ಚ್ 8 | 49,400 | 53,890 | 74,600 |
ಮಾರ್ಚ್ 9 | 50,700 | 55,310 | 75,700 |
ಮಾರ್ಚ್ 10 | 48,200 | 52,580 | 74,100 |
https://www.suddikanaja.com/2021/09/23/gold-rate-decline/