ಲಾರಿ ಕದ್ದು ಪರಾರಿಯಾದವರು 10 ದಿನಗಳಲ್ಲೇ ಅರೆಸ್ಟ್

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಅಂದಾಜು 7.50 ಲಕ್ಷ ಮೌಲ್ಯದ ಲಾರಿಯನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಕರಣ ದಾಖಲಾದ ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ನಿವಾಸಿ ಬಿ.ಕೆ.ಕರಿಬಸಪ್ಪ ಅಲಿಯಾಸ್ ಕರಿಯ(32) ಬಂಧಿತ. ಈತನ ಬಳಿಯಿಂದ ಕದ್ದಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

READ | ಟೈಯರ್ ಸ್ಫೋಟಗೊಂಡ ಕಾರು, ಬೈಕ್, ಟಾಟಾ ಏಸ್ ಗೆ ಡಿಕ್ಕಿ, ವಾಹನಗಳು ಜಖಂ

ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಲಾರಿಯನ್ನು ಮಾರ್ಚ್ 3ರಂದು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಠಾಣೆಯ ಪಿಐ ಮತ್ತು ಸಿಬ್ಬಂದಿ ತಂಡವು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!