ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ (KIOCL Recruitment 2022)ನಲ್ಲಿ ಒಟ್ಟು 9 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರಿ(Bangalore)ನಲ್ಲಿ ಉದ್ಯೋಗ ಹುಡುಕಾಟ(job search)ದಲ್ಲಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಏಪ್ರಿಲ್ 12 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೂರ್ತಿ ಸುದ್ದಿ ಓದಿ.
ನೇಮಕಾತಿ ಸಂಸ್ಥೆ | ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ (KIOCL) |
ಹುದ್ದೆಗಳ ಸಂಖ್ಯೆ | 30,000ದಿಂದ 1,20,000 ರೂಪಾಯಿ |
ಹುದ್ದೆ ಹೆಸರು | ಸಹಾಯಕ ಸಿವಿಲ್ ಎಂಜಿನಿಯರ್, ಮೆಕ್ಯಾನಿಕಲ್ ಎಂಜಿನಿಯರ್ |
ಉದ್ಯೋಗ ಸ್ಥಳ | ಬೆಂಗಳೂರು |
ನೇಮಕಾತಿ ಮಾಡಲಾಗುತ್ತಿರುವ ಹುದ್ದೆಗಳ ವಿವರ | |
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಮೆಕ್ಯಾನಿಕಲ್ ಎಂಜಿನಿಯರ್ | 4 |
ಎಲೆಕ್ಟ್ರಿಕಲ್ ಎಂಜಿನಿಯರ್ | 2 |
ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ | 1 |
ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ | 2 |
ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ, ಅನುಭವ
- ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ಹುದ್ದೆಗೆ ಮೆಕ್ಯಾನಿಕಲ್’ನಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು 3 ವರ್ಷಗಳ ಅನುಭವ ಹೊಂದಿರಬೇಕು. ಯಾವ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು ಎಂಬ ಬಗ್ಗೆ ತಿಳಿದುಕೊಳ್ಳಲು ಅಧಿಸೂಚನೆಯನ್ನು ಓದಿ.
- ಎಲೆಕ್ಟ್ರಿಕಲ್ ಎಂಜಿನಿಯರ್ (Electrical Engineer)ಹುದ್ದೆಗೆ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. 3 ವರ್ಷಗಳ ಅನುಭವ.
- ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ (Instrumentation and Control Engineer) ಹುದ್ದೆಗೆ ಇನ್ ಸ್ಟ್ರುಮೆಂಟೇಷನ್/ ಕಂಟ್ರೋಲ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ತೇರ್ಗಡೆಯಾಗಿರಬೇಕು. 3 ವರ್ಷ ಅನುಭವ
- ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ (Assistant Civil Engineer) ಹುದ್ದೆಗೆ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪಾಸಾಗಿರಬೇಕು. 3 ವರ್ಷ ಅನುಭವ.
ವಯೋಮಿತಿ, ಆಯ್ಕೆ ವಿಧಾನ
ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗೆ ಗರಿಷ್ಠ 35 ವರ್ಷ ಹಾಗೂ ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್, ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ ಹುದ್ದೆಗೆ ಗರಿಷ್ಠ 32 ವರ್ಷ. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲೀಕರಣ ನೀಡಲಾಗಿದೆ.
ಸಂಬಂಧಪಟ್ಟ ಹುದ್ದೆಗಳಿಗೆ ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು | |
ಅಧಿಸೂಚನೆಯ ದಿನಾಂಕ | 30-03-2022 |
ಎಲೆಕ್ಟ್ರಿಕಲ್ ಎಂಜಿನಿಯರ್, ಇನ್ ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್ ಎಂಜಿನಿಯರ್ | 11-04-2022 |
ಮೆಕ್ಯಾನಿಕಲ್ ಎಂಜಿನಿಯರ್, ಅಸಿಸ್ಟೆಂಟ್ ಸಿವಿಲ್ ಎಂಜಿನಿಯರ್ | 12-04-2022 |