ಮಹಿಳೆಯರಿಗ ಸೆಲ್ಫ್ ಡಿಫೆನ್ಸ್, ಕರಾಟೆ‌ ಉಚಿತ ತರಬೇತಿ, ಎಲ್ಲೆಲ್ಲಿ ನಡೆಯಲಿದೆ ಕ್ಯಾಂಪ್

 

 

ಸುದ್ದಿ ಕಣಜ.ಕಾಂ | DISTRICT | KARATE TRAINING
ಶಿವಮೊಗ್ಗ: ಮಹಿಳೆಯರ ಸ್ವರಕ್ಷಣೆ ಹಾಗೂ ವಿದ್ಯಾರ್ಥಿಗಳಿಗೆ ಕರಾಟೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು AZ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಅಧ್ಯಕ್ಷ ಮಹೀಬ್ ಹೇಳಿದರು.
ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು, AZ ಮಾರ್ಷಲ್ ಆರ್ಟ್ಸ್ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಕರಾಟೆ ತರಬೇತಿ ಹಾಗೂ ಬೇಸಿಗೆ ಶಿಬಿರವನ್ನು ಏಪ್ರಿಲ್ 15 ರಿಂದ ಮೇ 15ರ ವರೆಗೆ ಏರ್ಪಡಿಸಲಾಗಿದೆ.
ಭಾರತದಲ್ಲಿ‌ ಮಹಿಳೆಯರ ಮೇಲಿನ ದೌರ್ಜನ್ಯ, ಅಪಹರಣ, ಲೈಂಗಿಕ ಕಿರುಕುಳದಂತಹ ಸಮಸ್ಯೆಗಳು ಸವಾಲಾಗಿಕಾಡುತ್ತಿವೆ. ಶಿಬಿರದಲ್ಲಿ ಇದರ ಕುರಿತು ತಿಳಿವಳಿಕೆ ನೀಡಲಾಗುವುದು. ಮಕ್ಕಳ ಕೌಶಲ ತರಬೇತಿ, ದೈಹಿಕ ವ್ಯಾಯಾಮ ಮತ್ತು ಆರೋಗ್ಯದ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

READ | ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಐಟಿಐ ಪಾಸ್ ಆದವರಿಗೆ ಹ್ಯಾಲ್‍ನಲ್ಲಿ ಉದ್ಯೋಗ, ಕೈತುಂಬ ಸಂಬಳ

ಎಲ್ಲೆಲ್ಲಿ ತರಬೇತಿ?
ಬೆಳಗ್ಗೆ 6.30 ರಿಂದ 8 ಗಂಟೆ ಹಾಗೂ ಸಂಜೆ 5 ರಿಂದ 6.30ರ ವರೆಗೆ ತರಬೇತಿ ನೀಡಲಾಗುತ್ತದೆ. ದ್ರೌಪದಮ್ಮ ಸರ್ಕಲ್ ನಲ್ಲಿರುವ ಶಿವಮೊಗ್ಗ ಒನ್, ರವೀಂದ್ರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರಸ್ವತಿ ಮಂದಿರ, ಡಿಡಿಪಿಐ ಕಚೇರಿ ಆವರಣದ ಜಿಲ್ಲಾ ವಿದ್ಯಾ ಮಂದಿರ, ಗುರುಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು ಹಾಗೂ ಎನ್.ಟಿ. ರಸ್ತೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ನವೀನ್, ಖಜಾಂಚಿ ಸಾದಿಕ್, ಮೀನಾಕ್ಷಿ ಉಪಸ್ಥಿತರಿದ್ದರು.

error: Content is protected !!