ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಂತ್ರಿಕ ಶಿಕ್ಷಣ ಹಿನ್ನೆಲೆಯಲ್ಲಿ ಹೊಸ ಪದವೀಧರರಿಗೆ ಸಿವಿಲ್ ಕಾಮಗಾರಿ ನಿರ್ವಹಣೆ, ನಗರ ಯೋಜನೆ, ಹಣಕಾಸು, ಪರಿಸರ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ಪಡೆಯಲು ಅನುವಾಗುವ ಟುಲಿಪ್ ಯೋಜನೆಯಲ್ಲಿ ಇಂಟರ್ನ್‍ಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.
READ | ಅಬಕಾರಿ ಇಲಾಖೆಯಿಂದ ಶೀಘ್ರವೇ ನೇಮಕಾತಿ, ಕೆಪಿಎಸ್ಸಿಗೆ ಪ್ರಸ್ತಾವನೆ, ಎಷ್ಟು ಹುದ್ದೆ ಭರ್ತಿ?
ಮಾಸಿಕ ₹5 ಸಾವಿರ ಸ್ಟೈಫಂಡ್
ಅರ್ಹ ಪದವೀಧರರು ₹5000 ಸ್ಟೈಫಂಡ್‍ನೊಂದಿಗೆ ಒಂದು ವರ್ಷ ಹಾಗೂ ಸ್ಟೈಫಂಡ್ ರಹಿತವಾಗಿ 6 ತಿಂಗಳ ಇಂಟರ್ನ್ ಶಿಪ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯು ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿಯ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ಜಂಟಿ ಕಾರ್ಯಾಚರಣೆಯಾಗಿದೆ.
ಆಸಕ್ತ ಅರ್ಹ ಪದವೀಧರರು ದಿ: 15/12/2022 ರೊಳಗೆ https://internship.aicte-india.org ಲಿಂಕ್ ಬಳಸಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಬಳಸಬಹುದು ಅಥವಾ ಕಛೇರಿಗೆ ಭೇಟಿ ನೀಡುವಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2022/12/04/ox-attack-on-a-man-at-shivamogga-video-gone-viral/