ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ರಸ್ತೆ(Kuvempu Road)ಯ ಫ್ಯಾಮಿಲಿ ಸಲೂನ್ ಮತ್ತು ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸ್ಪಾ ಮಾಲೀಕರನ್ನು ಬಂಧಿಸಿ, ಆರು ಜನ ಯುವತಿಯರನ್ನು ರಕ್ಷಿಸಿದ್ದಾರೆ.
ಸ್ಪಾ ಮಾಲಿಕರಾದ ವಿದ್ಯಾಶ್ರೀ ಮತ್ತು ಇವರ ಪತಿ ಗೋಪಾಲ್ ಎಂಬುವವರನ್ನು ಬಂಧಿಸಲಾಗಿದೆ. ಇವರುಗಳು ಬೇರೆ ಕಡೆಯಿಂದ ಹುಡುಗಿಯರನ್ನು ಕರೆಸಿ ಅವರುಗಳಿಗೆ ಹಣದ ಆಮಿಷ ತೋರಿಸಿ ಪುಸಲಾಯಿಸಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಎಸ್ಪಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಎಸ್ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಉಪವಿಭಾಗ-ಬಿ ಡಿವೈಎಸ್ಪಿ ಎಂ.ಸುರೇಶ್ ನೇತೃತ್ವದಲ್ಲಿ ಮಹಿಳಾ ಠಾಣೆ ಪಿಐ ಕುಮಾರ್ ಮತ್ತು ತಂಡ ದಾಳಿ ನಡೆಸಿದೆ. 6 ಜನ ಯುವತಿಯರನ್ನು ರಕ್ಷಿಸಿ, ಆರೋಪಿತರ ವಿರುದ್ಧ ಶಿವಮೊಗ್ಗ ಮಹಿಳಾ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.