ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಮ್ಮ ಮನೆಯಲ್ಲೇ ಚಿನ್ನಾಭರಣ, ನಗದು ಹಣ ಕಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸೊಸೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಮಳಲಕೊಪ್ಪ ಗ್ರಾಮದ ನಿವಾಸಿ ಆರ್.ಹೇಮಾವತಿ(23), ಸತೀಶ್(22) ಎಂಬುವವರನ್ನು ಬಂಧಿಸಲಾಗಿದೆ. ₹4.30, ಲಕ್ಷ ಮೌಲ್ಯದ 90 ಗ್ರಾಂ. ಬಂಗಾರದ ಆಭರಣಗಳು ಮತ್ತು ₹2050 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
READ | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಐದು ಇ-ಬಸ್ ಗಳ ಸಂಚಾರ ಆರಂಭ, ಎಷ್ಟಿದೆ ಪ್ರಯಾಣ ದರ?
ವಿಚಾರಣೆ ವೇಳೆ ಕಳ್ಳತನದ ವಿಚಾರ ಬಯಲು
ಮೇ 13ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೊಪ್ಪ ಗ್ರಾಮದ ನಿವಾಸಿ ರೇಣುಕಮ್ಮ (50) ಅವರು ತಮ್ಮ ವಾಸದ ಮನೆಯ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ವಿಚಾರಣೆ ವೇಳೆ ರೇಣುಕಮ್ಮ (ಅತ್ತೆ) ಮನೆಯಲ್ಲಿಯೇ ಸೊಸೆ ಹೇಮಾವತಿ ಮತ್ತು ಪಕ್ಕದ ಮನೆಯ ಸತೀಶ್ ಸೇರಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬೇಧಿಸಿದ ತಂಡ
ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿವಮೊಗ್ಗ ಎ ಉಪ ವಿಭಾಗದ ಬಾಲರಾಜು ಮೇಲ್ವಿಚಾರಣೆಯಲ್ಲಿ ತುಂಗಾನಗರ ಠಾಣೆ ಸಿಪಿಐ ಬಿ.ಮಂಜುನಾಥ್ ನೇತೃತ್ವದಲ್ಲಿ ಪಿಎಸ್.ಐ ರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ, ಎಎಸ್ಐ ಮನೋಹರ್, ತುಂಗಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ, ಹರೀಶ್ ನಾಯ್ಕ, ಲಂಕೇಶ್, ಕಾಂತರಾಜ್, ಅರಿಹಂತ, ಹರೀಶ್, ಸಂತೋಷ್,ರಮೇಶ್, ಶಿವಕುಮಾರ್, ರಾಘವೇಂಧ್ರ, ಜಯ್ಯಪ್ಪ ಅವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.