ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಮಹಿಳಾ ಕಾರಾಗೃಹಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿಂದುಮಣಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ಬಿಂದುಮಣಿ ನೇತೃತದ ತಂಡವು ಶಿವಮೊಗ್ಗದ ಸಂಪೂರ್ಣ ಮಹಿಳಾ ಕೇಂದ್ರ ಕಾರಾಗೃಹ ಮತ್ತು ಬಂದಿಗಳನ್ನು ತಪಾಸಣೆ ನಡೆಸಿದರು. ಈ ವೇಳೆಯಲ್ಲಿ ಯಾವುದೇ ರೀತಿಯ ನಿಷೇಧಿತ ವಸ್ತುಗಳು ದೊರೆತಿರುವುದಿಲ್ಲ ಎಂದು ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಜಿ.ಹೇಮಾವತಿ ತಿಳಿಸಿರುತ್ತಾರೆ.
ತಪಾಸಣಾ ತಂಡಲ್ಲಿ ಒಬ್ಬ ಮಹಿಳಾ ಪೊಲೀಸ್ ಹೆಡ್ ಕಾನ್ಸ್‌ಟೇಬಲ್, 8 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್, 5 ಪುರುಷ ಪೊಲೀಸ್ ಕಾನ್ಸ್‌ಟೇಬಲ್ (ತಪಾಸಣಾ ಯಂತ್ರದೊಂದಿಗೆ) ಹಾಗೂ ಒಂದು ಡಾಸ್ ಸ್ಕ್ವಾಡ್ ಭಾಗವಹಿಸಿತ್ತು.