Janata darshan | ಶಿವಮೊಗ್ಗದಲ್ಲಿ ನಡೆದ ಮೊದಲ ಜನತಾದರ್ಶನದ ವಿಶೇಷಗಳೇನು? ಎಷ್ಟು ಅಹವಾಲು ಸ್ವೀಕಾರ, ಎಷ್ಟು ವಿಲೇವಾರಿ? ಸಚಿವರ ಸರಳತೆಗೆ ಫಿದಾ

Janatha darshan 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯ ಸರ್ಕಾರದ ಸೂಚನೆಯಂತೆ ಎಲ್ಲ ಜಿಲ್ಲೆಗಳಲ್ಲಿ ಮೊದಲ ಜನತಾದರ್ಶನ (Janata darshan) ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಭಾಗವಾಗಿಯೇ ಕುವೆಂಪು ರಂಗಮಂದಿರದಲ್ಲಿ (kuvempu rangamandir) ನಡೆದ ಕಾರ್ಯಕ್ರಮದಲ್ಲಿ 400-450ರ ವರೆಗೆ ಅಹವಾಲುಗಳನ್ನು ಸ್ವೀಕರಿಸಲಾಯಿತು. ಅದರಲ್ಲಿ ಏಳೆಂಟನ್ನು ವಿಲೇವಾರಿ ಮಾಡಲಾಯಿತು.one click many news logoಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಸಮಸ್ಯೆ, ಬಗರ್ ಹುಕುಂ ಹಕ್ಕುಪತ್ರ ವಿತರಣೆ, ಖಾತೆ- ಪೋಡಿ ಹಾಗೂ ಗೃಹ ಲಕ್ಷ್ಮೀ ಯೋಜನೆ ಸೇರಿದಂತೆ ಹಲವಾರು ಸಮಸ್ಯೆಗಳು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಅನಾವರಣಗೊಂಡವು.
ಸ್ಥಳದಲ್ಲಿಯೇ ಜಿಲ್ಲೆಯ ಜನರ ಸಮಸ್ಯೆ ಆಲಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಕೆಲವು  ಅರ್ಜಿಗಳಿಗೆ ಸ್ಥಳೀಯವಾಗಿ ಹಾಗೂ ಇನ್ನೂ ಕೆಲವು ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದ್ದೇನು ವಿಶೇಷ?
ಅಂಗವಿಕಲರ ಬಳಿ ತಾವೇ ಹೋದ ಸಚಿವ ಮಧು ಬಂಗಾರಪ್ಪ ಅಹವಾಲುಗಳನ್ನು ಸ್ವೀಕರಿಸಿದರು.
ಹಲವೆಡೆಯಿಂದ ಅಹವಾಲು ನೀಡಲು ಆಗಮಿಸಿದ್ದ ಜನರಿಗೆ ಸರದಿಯಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು, ವಯೋವೃದ್ಧರು, ಸಮೂಹದಲ್ಲಿ ಬಂದವರು ಇವರಿಗೆ ಮೊದಲ ಆದ್ಯತೆ ನೀಡಲಾಯಿತು.

READ | ಮಾಚೇನಹಳ್ಳಿಯಲ್ಲಿ ಲೈನ್ ಮ್ಯಾನ್ ಸಾವು, ಘಟನೆ ಹೇಗೆ ನಡೀತು?

ಏನೆಲ್ಲ ವಿಷಯಗಳ ಬಗ್ಗೆ ಅಹವಾಲು ಸಲ್ಲಿಕೆ?

  1. ಹಾಯ್‌ಹೊಳೆ ಹಾಗೂ ಕೋಟೆಗಂಗೂರು ಭಾಗದ ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ಸೌಲಭ್ಯ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು. ತಕ್ಷಣ ಬಸ್ ಸಂಪರ್ಕ ಕಲ್ಪಿಸುವಂತೆ ಕೆ.ಎಸ್.ಆರ್‌ಟಿಸಿ ವಿಭಾಗೀಯ ಅಧಿಕಾರಿಗೆ ಸೂಚನೆ ನೀಡಿದರು. ಬಸ್ ಸಂಪರ್ಕ ಕಲ್ಪಿಸಿದ ಕುರಿತು ನನಗೆ ಎರಡು ದಿನದಲ್ಲಿ ವರದಿ ನೀಡುವಂತೆ ತಿಳಿಸಿದರು.
  2. ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸಿಕೊಡುವಂತೆ ಮಲೆಶಂಕರ, ಪುರದಾಳು ಹಾಗೂ ಕೂಡಿ ಭಾಗದ ರೈತರು ಮನವಿ ಸಲ್ಲಿಸಿದರು. ಸಮಸ್ಯೆ ಸ್ಪಂದಿಸಿದ ಸಚಿವರು, ಈಗಾಗಲೇ ಹಲವು ಬಾರಿ ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖಾ ಸಚಿವರು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗುವುದು.
  3. ಬೀದಿಬದಿಯ ವ್ಯಾಪಾರಕ್ಕೆ ಸಾಲ ಸೌಲಭ್ಯ ಪಡೆದು ಸಾಲ ತೀರಿಸಿದ್ದೇನೆ. ಆದರೆ ಪುನಃ ಸಾಲ ಕೇಳಿದರೆ ಸಾಲ ನೀಡುತ್ತಿಲ್ಲ ಎಂದು ವಯೋವೃದ್ದೆಯೊಬ್ಬರು ಸಚಿವರ ಮುಂದೆ ಅಲವತ್ತುಕೊಂಡರು. ಇದಕ್ಕೆ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವರು, ಇದನ್ನು ಸಹಿಸಲು ಸಾಧ್ಯವಿಲ್ಲ. ಸಾಲ ಪಡೆದುಕೊಂಡು ಕಟ್ಟಿದ್ದಾರೆಂದರೆ ಪುನಃ ನೀಡಲು ಯಾಕೆ ಸಾಧ್ಯವಿಲ್ಲ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬ್ಯಾಂಕಿನ ಅಧಿಕಾರಿಗಳನ್ನು ಕರೆಯಿಸಿ ಸಾಲ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
  4. ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆ.ವೈ.ಸಿ.,  ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಸಾರಿಗೆ, ಹಾಸ್ಟೆಲ್,ಉದ್ಯೋಗ ನೀಡುವುದು  ಸೇರಿದಂತೆ ಇನ್ನಿತರ ಯೋಜನೆಗಳ  ಸಮಸ್ಯೆಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು.

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಅರಣ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!