BY Vijayendra | ಶಿವಮೊಗ್ಗದಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಸಂಭ್ರಮ, ಬಿ.ವೈ.ರಾಘವೇಂದ್ರಗೆ ಎತ್ತಿ ಕುಣಿದಾಡಿದ ಅಭಿಮಾನಿಗಳು

BY RAGHAVENDRA

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಗೆ ಆಯ್ಕೆ ಮಾಡಿದ್ದಕ್ಕೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೆಗಲ ಮೇಲೆ ಎತ್ತುಕೊಂಡು ಕುಣಿದಾಡಿದರು‌. ವಿನೋಬನಗರದ ಮನೆಯ ಮುಂದೆ ಪಟಾಕಿ ಸಿಡಿಸಲಾಯಿತು.

READ | ಬಿ.ವೈ.ವಿಜಯೇಂದ್ರಗೆ ದೀಪಾವಳಿ ಗಿಫ್ಟ್ ನೀಡಿದ ಬಿಜೆಪಿ ಹೈಕಮಾಂಡ್, ವಿಜಯೇಂದ್ರ ರಾಜಕೀಯ ಬದುಕಿನ ಹಾದಿಯ ಹೈಲೈಟ್ಸ್ ಇಲ್ಲಿವೆ

ನಗರದ ಬಿಎಸ್‌ವೈ ನಿವಾಸದ ಎದುರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ಪರವಾಗಿ ಘೋಷಣೆ ಕೂಗಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೂಡ ಸಂಭ್ರಮ ಆಚರಿಸಲಾ ಯಿತು. ಬಿಜೆಪಿಯ ಕಾರ್ಯಕರ್ತರು ಮತ್ತು ನಾಯಕರು ಸಂಭ್ರಮದಿಂದ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಬಿಜೆಪಿ ನಾಯಕರುಗಳಾದ ಬಿ.ವೈ. ರಾಘವೇಂದ್ರ, ಭಾನುಪ್ರಕಾಶ್, ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಬಿಜೆಪಿಗೆ ಈಗ ಶಕ್ತಿ ಬಂದಿದೆ. ಉತ್ತಮ ನಾಯಕತ್ವ ಸಿಕ್ಕಿದೆ. ಪಕ್ಷದ ಸಂಘಟನೆಗೆ ಮತ್ತಷ್ಟು ವೇಗ ಸಿಗಲಿದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲ‌ 28 ಸ್ಥಾನಗಳನ್ನೂ ನಾವು ಗೆಲ್ಲುತ್ತೇವೆ ಎಂದರು.
ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪಾಲಿಕೆ ಸದಸ್ಯ ಇ. ವಿಶ್ವಾಸ್ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾ ಮತ್ತು ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಆರ್.ಕೆ.ಸಿದ್ರಾಮಣ್ಣ, ಜ್ಞಾನೇಶ್ವರ್, ಜಗದೀಶ್, ಹರಿಕೃಷ್ಣ, ನಾಗರಾಜ್, ಶ್ರೀನಾಥ್, ಡಾ. ಧನಂಜಯಸರ್ಜಿ, ರತ್ನಾಕರ ಶೆಣೈ, ಮಾಲತೇಶ್, ಸಂತೋಷ್ ಬಳ್ಳೇಕೆರೆ, ಸುಭಾಷ್, ಮೋಹನ್ ರೆಡ್ಡಿ, ಶಿವಕುಮಾರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್ ಸೇರಿದಂತೆ ಹಲವರಿದ್ದರು.

BY Vijayendra 2

 

error: Content is protected !!