ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬೆಳಗ್ಗೆ 9 ಗಂಟೆಯವರೆಗೆ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದ ಶಿವಮೊಗ್ಗ ಲೋಕಸಭೆ ಕ್ಷೇತ್ರ ಬೆಳಗ್ಗೆ 11 ಗಂಟೆ ಹೊತ್ತಿಗೆ ದ್ವಿತೀಯ ಸ್ಥಾನದಲ್ಲಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಬೆಳಗ್ಗೆ 11ರವರೆಗೆ ಶೇ.27.21ರಷ್ಟು ಮತದಾನವಾಗಿದೆ. ಒಟ್ಟು 17,52,885ರಲ್ಲಿ 4,73,585 ಮತಗಳು ಚಲಾವಣೆಯಾಗಿವೆ.
ಶಿಕಾರಿಪುರ ಮತಕ್ಷೇತ್ರದ ಪಿಎಸ್ ಸಂಖ್ಯೆ 139ರ ಸಖಿ ಮತಗಟ್ಟೆಯಲ್ಲಿ ಬೆಳಗ್ಗೆ 11.30ರ ವರೆಗೆ ಶೇ.27 ಮತದಾನ ಆಗಿದೆ. ಮಹಿಳೆಯರು ಮತ್ತು ಪುರುಷರು ಪ್ರತ್ಯೇಕ ಸರತಿಯಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.
ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಮತಗಟ್ಟೆ 88ರಲ್ಲಿ 98 ವರ್ಷ ಶಿವಗಂಗಮ್ಮ ಎಂಬುವವರು ಮತದಾನ ಮಾಡಿ ಗಮನಸೆಳೆದರು.
READ | ರಾಜ್ಯದಲ್ಲೇ ಓಟಿಂಗ್‍ನಲ್ಲಿ ಶಿವಮೊಗ್ಗ ನಂ.1, ಜಿಲ್ಲೆಯ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ?
ಎಲ್ಲೆಲ್ಲಿ ಎಷ್ಟು ಮತದಾನ?
ಬೈಂದೂರು ಶೇ.31.22
ಭದ್ರಾವತಿ ಶೇ.24.33
ಸಾಗರ ಶೇ.29.61
ಶಿಕಾರಿಪುರ ಶೇ.24.64
ಶಿವಮೊಗ್ಗ ಶೇ.26.78
ಶಿವಮೊಗ್ಗ ಗ್ರಾಮಾಂತರ ಶೇ.26.99
ಸೊರಬ ಶೇ.25.13
ತೀರ್ಥಹಳ್ಳಿ ಶೇ.28.64