ಸುದ್ದಿ ಕಣಜ.ಕಾಂ ಶಿವಮೊಗ್ಗ
(Job Interview) SHIVAMOGGA: ಜಿಲ್ಲಾ ಕುಟುಂಬ ಕಲ್ಯಾಣ ಸಂಘ, ಕ್ಷಯರೋಗ ವಿಭಾಗ, ಎನ್.ವಿ.ಎಚ್.ಸಿ.ಪಿ ಶಿವಮೊಗ್ಗ ಇವರ ಅಡಿಯಲ್ಲಿ ಮಾಸಿಕ ಗೌರವಧನ ಆಧಾರದ ಮೇಲೆ (ಮಾರ್ಚ್ 2025 ರ ವರೆಗೆ ಮಾತ್ರ) ಪೀರ್ ಸಪೋರ್ಟರ್(ಪರಸ್ಪರ ಬೆಂಗಲಿಗರು) ಹುದ್ದೆ ನೇಮಕಾತಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಅರ್ಜಿ ಜೊತೆಗೆ ಮೂಲ ದಾಖಲಾತಿ ಮತ್ತು ನಕಲು ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣ ಇಲ್ಲಿ ಆ.14 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಹಾಜರಾಗಬೇಕು. ಆಸಕ್ತರು ಸಂದರ್ಶನದಲ್ಲಿ ಭಾಗವಹಿಸಬಹುದೆಂದು ಕಾರ್ಯಕ್ರಮಾಧಿಕಾರಿ ಜಿಲ್ಲಾ ಕ್ಷಯರೋಗ ನಿವಾರಣಾ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ | ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನ, ಎಷ್ಟು ವೇತನ ನೀಡಲಾಗುವುದು?