ಸುದ್ದಿ ಕಣಜ.ಕಾಂ ಶಿವಮೊಗ್ಗ
(Police drive) SHIVAMOGGA: ಜಿಲ್ಲಾ ಪೊಲೀಸ್ ಇಲಾಖೆ ಪ್ರಖರ ಬೆಳಕು ಸೂಸುವ ಎಲ್ಇಡಿ ದೀಪ ಹಾಕಿಸಿಕೊಂಡ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ. ಬರೀ ಹತ್ತು ದಿನಗಳಲ್ಲಿ 1,565 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕೇಂದ್ರ ಮೋಟಾರು ವಾಹನ ಕಾಯ್ದೆ (Central Motor Vehicle Act) ಅಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಅಳವಡಿಸಬೇಕಾಗಿರುವ ಹೆಡ್ ಲೈಟ್ ಗಳನ್ನು ಅಳವಡಿಸದೇ ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರ ಸೂಸುವ ಮತ್ತು ಕಣ್ಣು ಕುಕ್ಕುವ (Dazzling and Glaring) ಎಲ್ಇಡಿ ದೀಪಗಳನ್ನು ಅಳವಡಿಸುವುದರಿಂದ, ಎದುರಿನಿಂದ ಬರುವ ವಾಹನಗಳ ಮತ್ತು ಇತರ ವಾಹನಗಳ ಚಾಲಕರುಗಳಿಗೆ ರಸ್ತೆ ಗೋಚರತೆ ಕಡಿಮೆಯಾಗಿ ತೀವ್ರ ತೊಂದರೆಯುಂಟಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಆ.1ರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
READ | 23 ಮನೆಗಳಿಗೆ ಕನ್ನ ಹಾಕಿದವ ಅರೆಸ್ಟ್, ಇನ್ನೊಂದು ಮನೆಕಳವು ಪ್ರಕರಣದಲ್ಲಿ ಇಬ್ಬರು ಬಂಧನ
ಎಲ್ಲಿ ಎಷ್ಟು ಪ್ರಕರಣಗಳು ದಾಖಲು?
ವಾಹನದ ಚಾಲಕರು, ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿವೆ.
* ಶಿವಮೊಗ್ಗ –ಎ ಉಪ ವಿಭಾಗ 38 ಪ್ರಕರಣ
* ಶಿವಮೊಗ್ಗ – ಬಿ ಉಪ ವಿಭಾಗ 471 ಪ್ರಕರಣ
* ಭದ್ರಾವತಿ ಉಪ ವಿಭಾಗ 388 ಪ್ರಕರಣ
* ಶಿಕಾರಿಪುರ ಉಪ ವಿಭಾಗ 350 ಪ್ರಕರಣ
* ಸಾಗರ ಉಪ ವಿಭಾಗ 172 ಪ್ರಕರಣ
* ತೀರ್ಥಹಳ್ಳಿ ಉಪ ವಿಭಾಗ 146 ಪ್ರಕರಣ
* ಒಟ್ಟು 1,565 ಪ್ರಕರಣಗಳು ದಾಖಲಾಗಿವೆ.