ಸುದ್ದಿ ಕಣಜ.ಕಾಂ ಗಾಜನೂರು
GAJANUR: ಗಾಜನೂರು ಜಲಾಶಯ (Gajanur dam) ಸುತ್ತ ಆ.3ರಿಂದ ಸೆಪ್ಟೆಂಬರ್ 2 ರ ವರೆಗೆ ನಿಷೇಧಾಜ್ಞೆ ಹೇರಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ (Gurudatta Hegade) ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿದ್ದು, ಎಲ್ಲ ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ಜಲಾಶಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಬರುತ್ತಿದ್ದು, ಜಲಾಶಯದ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಜಲಾಶಯದ ಪ್ರದೇಶದ ಸುತ್ತಮುತ್ತಲು 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಕಲಂ 163 ರಂತೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.
READ | ಭದ್ರಾ ಜಲಾಶಯ ಸುತ್ತ ಇಂದಿನಿಂದ ನಿಷೇಧಾಜ್ಞೆ ಜಾರಿ, ಯಾರೂ ಡ್ಯಾಂ ಸುತ್ತ ಸುಳಿಯುವಂತಿಲ್ಲ, ಕಾರಣವೇನು?
ನಿಬಂಧನೆಗಳು
1. ಐದು (5) ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.
2. ತುಂಗಾ ನದಿಯಲ್ಲಿ ನೀರಿಗೆ ಇಳಿಯುವುದನ್ನು, ಪೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.
3. ಜಲಾಶಯವು ಸಂರಕ್ಷಿತ ಪ್ರದೇಶ ಆಗಿರುವುದರಿಂದ, ಗೇಟಿನಲ್ಲಿ ಗುಂಪುಗೂಡುವುದು, ಡ್ಯಾಂ ನ ಮೇಲೆ ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
4. ಜಲಾಶಯದ ಸೆಕ್ಯೂರಿಟಿ, ಸಿಬ್ಬಂದಿಗೆ ಯಾವುದೇ ತೊಂದರೆ ಉಂಟು ಮಾಡುವಂತಿಲ್ಲ.
5. ಬಾಗಿನ ನೀಡಲು ಬರುವವರು ನೀರಿನಲ್ಲಿ ಇಳಿಯುವಂತಿಲ್ಲ ಹಾಗೂ ಈಜಾಡುವಂತಿಲ್ಲ.
6. ನಿಷೇಧಾಜ್ಞೆ ಸಮಯದಲ್ಲಿ ಆಯುಧ, ಶಸ್ತ್ರಾಸ್ತ್ರಗಳು ಮತ್ತು ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ.
7. ಯಾವುದೇ ರೀತಿಯ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡತಕ್ಕದ್ದಲ್ಲ.
8. ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.