Crime News | ಇಬ್ಬರು ಮಕ್ಕಳನ್ನು‌ ಬಾವಿಗೆ ತಳ್ಳಿ‌ ತಾನೂ ಹಾರಿದ ಗೃಹಿಣಿ | ಪಂಚಮಿ‌ ದಿನವೇ ಹಾಕು ಕಚ್ಚಿ ಮಹಿಳೆ ಸಾವು | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ, ಇಬ್ಬರು ಅರೆಸ್ಟ್

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(CRIME NEWS) SHIVAMOGGA: ಹೊಸನಗರ ತಾಲೂಕಿನ ಚಂಪಕಾಪುರದಲ್ಲಿ ಗೃಹಿಣಿಯೊಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿ ಪ್ರಾಣಬಿಟ್ಟ ಹೃದಯವಿದ್ರಾವಕ‌ ಘಟನೆ ಸಂಭವಿಸಿದೆ.
ಗ್ರಾಮದ ರಾಜೇಶ್ ಎಂಬುವವರ ಪತ್ನಿ‌ ವಾಣಿ (32), ಸಮರ್ಥ (12), ಸಂಪದ (6) ಮೃತರು. ವಾಣಿ ಮ‌ೂಲತಃ ಭದ್ರಾವತಿಯವರಾಗಿದ್ದು, ರಾಜೇಶ್ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿದ್ದರು.
ರಾಜೇಶ್ ಅವರು ಟಿವಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ನಿಟ್ಟೂರಿನ ಖಾಸಗಿ ಶಾಲೆಯಲ್ಲಿ ಮಗ ಐದನೇ ತರಗತಿಯಲ್ಲಿ ಹಾಗೂ ಮಗಳು ಒಂದನೇ ತರಗತಿ ಓದುತ್ತಿದ್ದರು.

Crime logo
ಮನೆಯಲ್ಲಿ ಕಾಣದಿದ್ದಾಗ ಹುಡುಕಾಟ
ಗುರುವಾರ ರಾತ್ರಿ ವಾಣಿ ಮತ್ತು ಮಕ್ಕಳು ಕಾಣದಿದ್ದಾಗ ಕುಟುಂಬದವರು ಹುಡುಕಾಟ ಮಾಡಿದ್ದಾರೆ. ಆ ವೇಳೆ ಮಗ ಕೂಗಿದ ದನಿಯೇನೋ ಕೇಳಿಸುತ್ತಿತ್ತು. ಆದರೆ ಎಲ್ಲಿಂದ ಬರುತ್ತಿದೆ ಎಂದು ಖಚಿತವಾಗಿರಲಿಲ್ಲ. ಬೆಳಗ್ಗೆ ನೆರೆಮನೆಯ ಬಾವಿಯ ಜಾಲರಿ ಜಾರಿದ್ದು ಗಮನಿಸಿ‌ ಇಣುಕಿ ನೋಡಿದಾಗ ಶವ ಮೇಲೆ ತೇಲುತ್ತಿತ್ತು. ಪರಿಶೀಲಿಸಿದಾಗ ಮೂವರ ಶವಗಳು ಬಾವಿಯಲ್ಲಿ ಸಿಕ್ಕಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭದ್ರಾವತಿ ಡಿವೈಎಸ್ಪಿ ನಾಗರಾಜ್, ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್, ನಗರ ಠಾಣೆ ಪಿಎಸ್ಐ ರಮೇಶ್ ಮತ್ತಿತರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ನಾಲ್ಕು ತಿಂಗಳ ಬಾಣಂತಿ ಸಾವು

SAGAR: ತಾಲೂಕಿನ ಹುತ್ತಾದಿಂಬಾ ಗ್ರಾಮದಲ್ಲಿ ಪಂಚಮಿ ದಿನವೇ ಹಾವು ಕಚ್ಚಿ ನಾಲ್ಕು ತಿಂಗಳ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ರಂಜಿತಾ(26) ಎಂಬುವವರು ಮೃತಪಟ್ಟಿದ್ದಾರೆ. ಹಸುವಿಗೆ ಮೇವು ತರಲು ಹೋದಾಗ ಪೊದೆಯಲ್ಲಿದ್ದ‌ ಹಾವು ಕಡಿದಿದ್ದು, ತಕ್ಷಣ ಸಾಗರ ಆಸ್ಪತ್ರೆಗೆ ಕರೆತರಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈಕೆಗೆ ಮೂರು ವರ್ಷದ ಪುತ್ರಿ ಹಾಗೂ ನಾಲ್ಕು ತಿಂಗಳ ಪುತ್ರನಿದ್ದಾನೆ.

READ | ಎಲ್ಇಡಿ ದೀಪಗಳ ವಿರುದ್ದ ಖಾಕಿ ಸಮರ, 10 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ ದಾಖಲು

ಆತ್ಮಹತ್ಯೆ, ಇಬ್ಬರ ಬಂಧನ

SHIMOGA: ಕೀರ್ತಿನಗರದಲ್ಲಿ ಗುರುವಾರ ಬೆಳಗ್ಗೆ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದ ಸಿ.ಪಿ.ನಂಜುಂಡಪ್ಪ (63) ಎಂಬುವವರ ಆತ್ಮಹತ್ಯೆ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸಮನೆ ನಿವಾಸಿ ಎ.ಭರತೇಶ್ (42), ಗೋಲ್ಡನ್ ಸಿಟಿ ‌ನಿವಾಸಿ ಎಚ್.ಎಂ.ಸತೀಶ್ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

one click many news logo

error: Content is protected !!