ಸುದ್ದಿ ಕಣಜ.ಕಾಂ ಸಾಗರ/ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಮತ್ತು ಕಳ್ಳತನ ಯತ್ನ ಪ್ರಕರಣಗಳನ್ನು ಪೊಲೀಸರು ಶುಕ್ರವಾರ ಬೇಧಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಶಿವಮೊಗ್ಗದ ಅಣ್ಣಾನಗರ ನಿವಾಸಿ 30 ವರ್ಷದ ತಬ್ರೇಜ್ ಅಲಿಯಾಸ್ ಬಚ್ಚಾ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತನಿಂದ 45 ಗ್ರಾಂ ತೂಕದ 1.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1 ಕೆಜಿ 600 ಗ್ರಾಂ ತೂಕದ 96 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಲ್ಲೆಲ್ಲಿ ದಾಖಲಾಗಿದ್ದವು ಕೇಸ್: ಸಾಗರ ಗ್ರಾಮಾಂತರ ಠಾಣೆಯಲ್ಲಿ ಇದೇ ವರ್ಷದಲ್ಲಿ ಎರಡು ಮನೆಗಳ್ಳತನ ಪ್ರಯತ್ನ ಪ್ರಕರಣಗಳು ಹಾಗೂ ಹೊಳೆಹೊನ್ನೂರು ಠಾಣೆಯಲ್ಲಿ ಒಂದು ಮನೆಗಳ್ಳತನ ಪ್ರಕರಣ ದಾಖಲಾಗಿತ್ತು. ತಂಡದಲ್ಲಿ ಯಾರಿದ್ದಾರೆ?: ಸಾಗರ ಡಿವೈಎಸ್ಪಿ ವಿನಾಯಕ ಶೆಟಗೇರಿ ಮಾರ್ಗದರ್ಶನದಲ್ಲಿ ಸಾಗರ ಗ್ರಾಮಾಂತರದ ಸಿಪಿಐ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಕರಣ ಬೇಧಿಸಲಾಗಿದೆ. ತಂಡದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಪಿಎಸ್ಐ ಭರತ್ ಕುಮಾರ್, ಸುಜಾತ ಮತ್ತು ಸಿಬ್ಬಂದಿ ಫೈರೋಜ್ ಅಹಮದ್, ಅಶೋಕ್, ರವಿಕುಮಾರ್, ಹಜರತ್ ಅಲಿ, ಸಂತೋಷ್ ನಾಯ್ಕ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಸುದ್ದಿ ಕಣಜ.ಕಾಂ | KARNATAKA | 02 OCT 2022 ಶಿವಮೊಗ್ಗ(shivamogga): ಡಾಗ್ ಶೋ(Dog show)ದಲ್ಲಿ ಉಡುಪಿ (Udupi) ಶ್ವಾನ ಪ್ರಥಮ ಸ್ಥಾನ ಗಳಿಸಿದೆ. ವಿವಿಧ ಜಿಲ್ಲೆಯ ಶ್ವಾನಗಳು ಬಹುಮಾನ(Prize)ಕ್ಕೆ ಭಾಜನವಾಗಿವೆ. ಅವುಗಳ […]
ಸುದ್ದಿ ಕಣಜ.ಕಾಂ | TALUK | POLITICAL NEWS ಶಿಕಾರಿಪುರ(ಶಿರಾಳಕೊಪ್ಪ): ಶಿವಮೊಗ- ಶಿಕಾರಿಪುರ- ರಾಣೇಬೆನ್ನೂರು ರೈಲ್ವೆ ಯೋಜನೆಯ ವಿವಿಧ ಕೆಲಸಗಳು ಪ್ರಾರಂಭವಾಗಿವೆ. ಇದು ಸ್ವಾತಂತ್ರ್ಯ ನಂತರ ಮೊದಲನೇ ರೈಲ್ವೇ ಯೋಜನೆ ನಮ್ಮ ಶಿಕಾರಿಪುರದಲ್ಲಿ […]