ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ: ಕೊರೊನಾ ಸೋಂಕು ಮತ್ತೆ ಉಲ್ಬಣಿಸಿದೆ. ಭಾನುವಾರವೊಂದೇ ದಿನ 148 ಜನರಿಗೆ ಕೊರೊನಾ ವೈರಾಣು ಸೋಂಕು ಒಕ್ಕರಿಸಿದೆ. 12 ಜನ ಗುಣಮುಖರಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ.
ಶಿವಮೊಗ್ಗ, ಭದ್ರಾವತಿಯಲ್ಲಿ ಹೈ ರಿಸ್ಕ್
ಶಿವಮೊಗ್ಗ ತಾಲೂಕಿನಲ್ಲಿ 50 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಭದ್ರಾವತಿಯಲ್ಲಿ 47, ತೀರ್ಥಹಳ್ಳಿ 7, ಶಿಕಾರಿಪುರ 19, ಸಾಗರ 19, ಹೊಸನಗರ 2, ಸೊರಬ 2, ಬಾಹ್ಯ ಜಿಲ್ಲೆಯ ಇಬ್ಬರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಸಕ್ರಿಯ ಪ್ರಕರಣಗಳಲ್ಲೂ ಏರಿಕೆ
ಮೂರ್ನಾಲ್ಕು ದಿನಗಳ ಹಿಂದಷ್ಟೆ ನೂರರ ಒಳಗಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಭಾನುವಾರ ಇದರ ಸಂಖ್ಯೆ 361ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 51 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿನಲ್ಲಿ 14 ಜನ, ಖಾಸಗಿ ಆಸ್ಪತ್ರೆಯಲ್ಲಿ 29, ಹೋಮ್ ಐಸೋಲೇಷನ್ ನಲ್ಲಿ 248 ಹಾಗೂ ಟ್ರಿಯೇಜ್ ನಲ್ಲಿ 19 ಜನರಿದ್ದಾರೆ.
https://www.suddikanaja.com/2021/06/08/corona-positive-case-increase-in-shivamogga/